Asianet Suvarna News Asianet Suvarna News

ಬ್ಲೌಸ್ ಇಲ್ಲದೆ ಸೀರೆಯಲ್ಲಿ ಪ್ರಿಯಾಂಕಾ ಚೋಪ್ರಾ ಟ್ರೋಲ್; ಬಿಕಿನಿಲಿ ಕುಣಿಯೋ ದೀಪಿಕಾಗೇಕೆ ಏನೂ ಹೇಳಲ್ಲ ಕೇಳಿದ್ರು ನೆಟಿಜನ್ಸ್

ಪ್ರಿಯಾಂಕಾ ಚೋಪ್ರಾ ಜೊನಾಸ್‌ಳ ಹಳೆಯ ಬ್ಲೌಸ್‌ಲೆಸ್ ಸೀರೆಯ ಫೋಟೋವೊಂದು ಇಂಟರ್ನೆಟ್‌ನಲ್ಲಿ ಮತ್ತೆ ಟ್ರೋಲ್ ಆಗುತ್ತಿದೆ. ಈ ಟ್ರೋಲ್‌ ಪರವಾಗಿ ಕೆಲವರು, ಪ್ರಿಯಾಂಕಾ ಪರವಾಗಿ ಕೆಲವರು ವಾದದಲ್ಲಿ ತೊಡಗಿದ್ದಾರೆ. 

Priyanka Chopra Gets Trolled For Wearing A Blouse-Less Saree For An International Magazine skr
Author
First Published May 13, 2024, 12:29 PM IST

ಪ್ರಿಯಾಂಕಾ ಚೋಪ್ರಾ ಜೊನಾಸ್ ಇನ್‌ಸ್ಟೈಲ್ ಮ್ಯಾಗಜೀನ್‌ನ ಮುಖಪುಟದಲ್ಲಿ ಡಿಸೈನರ್ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಫೋಟೋ ಮತ್ತೆ ಟ್ರೋಲ್ ಆಗಿದ್ದು, ಇಂಟರ್ನೆಟ್ಟನ್ನು ಎರಡು ಭಾಗಗಳಾಗಿ ವಿಂಗಡಿಸಿದೆ.

ಆಕೆ ಬ್ಲೌಸ್ ಧರಿಸದ್ದಕ್ಕೆ ಬುದ್ಧಿ ಹೇಳುವವರು ಒಂದೆಡೆಯಾದರೆ, ಪೀಸೀಯ ಬೆಂಬಲಕ್ಕೆ ನಿಂತು ಜಗಳಕ್ಕೆ ತೊಡೆ ತಟ್ಟಿದವರು ಮತ್ತೊಂದೆಡೆ. ತರುಣ್ ತಹಿಲಿಯಾನಿಯ ವಿನ್ಯಾಸದ ಡಿಸೈನರ್ ಸ್ಯಾರಿ ಧರಿಸಿದ್ದ ಪ್ರಿಯಾಂಕಾ, 'ಫ್ಯಾಶನ್ ಜಾಗತಿಕ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ. ಅದು ಆಗಾಗ್ಗೆ ಶತಮಾನಗಳ ಸಂಪ್ರದಾಯದಿಂದ ಉದ್ಭವಿಸುತ್ತದೆ' ಎಂದು ಹೇಳಿದ್ದರು.

ಆದರೆ ಅವರ ಈ ಬ್ಲೌಸ್‌ಲೆಸ್ ಸೀರೆಯ ಸ್ಟೈಲ್ ಸಾಂಪ್ರದಾಯಿಕ ಭಾರತೀಯರಿಗೆ ರುಚಿಸಿಲ್ಲ. 'ಇದು ಸೀರೆ, ಸಂಪ್ರದಾಯ, ಸಂಸ್ಕೃತಿ ಎಂದು ಹೇಳಿಕೊಂಡು ಈ ನಟಿಯರು ಉಡುತ್ತಾರೆ. ಆದರೆ, ಫ್ಯಾಶನ್ ಹೆಸರಲ್ಲಿ ಅದರ ಸೊಬಗನ್ನೇ ಹಾಳು ಮಾಡುತ್ತಾರೆ' ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಡಲು ಶಾರೂಖ್ ಜೊತೆಗಿನ ಸಂಬಂಧ ಕಾರಣನಾ?
 

'ಬ್ಲೌಸ್ ಎಲ್ಲಿ ಹೋಯ್ತು' ಎಂದು ಮತ್ತೊಬ್ಬರು ಕೇಳಿದ್ದಾರೆ. 'ನಿಮಗೆ ಬೆನ್ನು ತೋರಿಸಬೇಕೆಂದಿದ್ದರೆ ಅದಕ್ಕೆ ಸೀರೆಯೇ ಆಗಬೇಕೇ' ಎಂದು ಇನ್ನೊಬ್ಬ ನೆಟ್ಟಿಗರು ಗರಂ ಆಗಿದ್ದಾರೆ. 

'ನೀವು ಟಾಪ್‌ಲೆಸ್ ಆಗಬೇಕೆಂದಿದ್ದರೆ ಆಗಿ, ಆದರೆ ಇದಕ್ಕಾಗಿ ಸೀರೆ ಹಾಗೂ ಅದರ ಸಂಸ್ಕೃತಿಯನ್ನು ಹಾಳು ಮಾಡಬೇಡಿ' ಎಂದು ಮತ್ತೊಬ್ಬರು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಇನ್ನು ಪ್ರಿಯಾಂಕಾಳ ಬ್ಲೌಸ್ಲೆಸ್ ಸೀರೆಯ ಪರ ವಹಿಸಿ ಮಾತಾಡುವವರಲ್ಲೊಬ್ಬರು, 'ಭಾರತ ಬಿಟ್ಟು ಅಮೆರಿಕ ಹೋದ ನಟಿಯನ್ನು ಮಾತ್ರ ಟಾರ್ಗೆಟ್ ಮಾಡುತ್ತೀರಿ, ಇಲ್ಲಿಯೇ ಇದ್ದು ಸದಾ ಬಿಕಿನಿಯಲ್ಲಿ ಕುಣಿಯುವ ದೀಪಿಕಾ ಪಡುಕೋಣೆಗೇಕೆ ಏನೂ ಹೇಳುವುದಿಲ್ಲ' ಎಂದು ಟ್ರೋಲಿಗರನ್ನು ಪ್ರಶ್ನಿಸಿದ್ದಾರೆ.

ದೀಪಿಕಾ ಅಲ್ಲ, ಆಲಿಯಾ ಅಲ್ಲ.. 40 ಕೋಟಿ ರೂ. ಸಂಭಾವನೆ ಪಡೆಯೋ ಈ ನಟಿ 7 ವರ್ಷಗಳಲ್ಲಿ ಒಂದೂ ಹಿಟ್ ಸಿನಿಮಾ ಕೊಟ್ಟಿಲ್ಲ..
 

ಮತ್ತೊಬ್ಬರು ಪೀಸೀಯ ಪರ ನಿಂತು, 'ಅವಳಿಗಿಷ್ಟ ಬಂದಿದ್ದನ್ನು ಧರಿಸುತ್ತಾಳೆ. ನಿಮ್ಮ ಮನೆಯ ಸಮಸ್ಯೆಗಳ ಬಗ್ಗೆ ನೋಡಿಕೊಳ್ಳಿ' ಎಂದಿದ್ದಾರೆ.

ಇನ್ನೂ ಒಬ್ಬರು ಸಂಸ್ಕೃತಿಯ ಆಧಾರದಲ್ಲಿ ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದು, 'ಭಾರತದಲ್ಲಿ ಶತಮಾನಗಳ ಹಿಂದೆ ಕೆಲ ರಾಜ್ಯಗಳಲ್ಲಿ, ಕೆಲ ಸಮುದಾಯಗಳಲ್ಲಿ ಬ್ಲೌಸ್ ಇಲ್ಲದೆ ಸೀರೆ ಧರಿಸುವುದು ಸಾಮಾನ್ಯವಾಗಿತ್ತು. ಇದನ್ನು ಇಷ್ಟು ದೊಡ್ಡ ಮಾಡುವ ಅಗತ್ಯವೇನಿಲ್ಲ' ಎಂದಿದ್ದಾರೆ. 

 

Latest Videos
Follow Us:
Download App:
  • android
  • ios