Asianet Suvarna News Asianet Suvarna News

ಬೆಂಗಳೂರಲ್ಲೊಂದು ಅಮಾನವೀಯ ಘಟನೆ: ಹಸಗೂಸನ್ನು ರಸ್ತೆಬದಿಗೆ ಎಸೆದು ಹೋದ ತಾಯಿ!

ಹೆತ್ತ ತಾಯಿಯೊಬ್ಬಳು ಹಸುಗೂಸನ್ನು ರಸ್ತೆ ಬದಿಗೆ ಎಸೆದು ಹೋದ ಘಟನೆ ಬೆಂಗಳೂರಿನ ಯಲಹಂಕದ ಅಟ್ಟೂರಲ್ಲಿ ನಡೆದಿದೆ. ಹುಟ್ಟಿ ಕೆಲವೇ ಗಂಟೆಗಳಾಗಿರುವಾಗಲೇ ಬಸ್‌ ನಿಲ್ದಾಣದಲ್ಲಿ ಎಸೆದುಹೋಗಿರುವ ಪಾಪಿಗಳು. ಅಟ್ಟೂರು ಬಸ್ ನಿಲ್ದಾಣದ ಬಳಿ ಇರುವ ಗೂಡ್ಸ್ ಸ್ಟ್ಯಾಂಡ್ ಬಳಿ ಶಿಶು ಪತ್ತೆಯಾಗಿದೆ.

A mother threw newborn baby on road side at yalahanka bengaluru rav
Author
First Published May 16, 2024, 10:45 AM IST

ಬೆಂಗಳೂರು (ಮೇ.16): ಒಂಭತ್ತು ತಿಂಗಳು ಹೊತ್ತು, ಹೆತ್ತ ತಾಯಿಯೇ ಹಸಿ ಹಸಿಯಾದ ಎಳೆಮಗುವನ್ನು ಕಸದ ಬುಟ್ಟಿಯಲ್ಲೋ, ಪಾಳುಬಾವಿಯಲ್ಲೋ ಎಸೆದು ಹೋದಾಗ ಹೆತ್ತ ತಾಯಿಯದು ಕರುಳೋ, ಕಬ್ಬಿಣದ ಸರಳೋ ಎಂಬ ಅನುಮಾನ ಮೂಡುತ್ತದೆ ಅಷ್ಟೇ ಹೇಸಿಗೆ ಮೂಡುತ್ತದೆ. ಹಸಗೂಸನ್ನು ನೋಡಿದವರು ಎಸೆದ ತಾಯಿಗೆ ಹಿಡಿ ಶಾಪ ಹಾಕದೆ ಮುಂದಕ್ಕೆ ಹೋಗುವುದಿಲ್ಲ. ಇಂತಹ ಹಸುಗೂಸುಗಳು ಕಣ್ತೆರೆಯುವ ಮುನ್ನವೇ ಬೀದಿಗೆ ಎಸೆದು ಹೋಗುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ ಹೊರತು ಕಡಿಮೆಯಾಗುತ್ತಿಲ್ಲ. ಇದೀಗ ಮತ್ತೊಂದು ಅಂತಹದ್ದೇ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೆತ್ತ ತಾಯಿಯೊಬ್ಬಳು ಹಸುಗೂಸನ್ನು ರಸ್ತೆ ಬದಿಗೆ ಎಸೆದು ಹೋದ ಘಟನೆ ಬೆಂಗಳೂರಿನ ಯಲಹಂಕದ ಅಟ್ಟೂರಲ್ಲಿ ನಡೆದಿದೆ. ಹುಟ್ಟಿ ಕೆಲವೇ ಗಂಟೆಗಳಾಗಿರುವಾಗಲೇ ಬಸ್‌ ನಿಲ್ದಾಣದಲ್ಲಿ ಎಸೆದುಹೋಗಿರುವ ಪಾಪಿಗಳು. ಅಟ್ಟೂರು ಬಸ್ ನಿಲ್ದಾಣದ ಬಳಿ ಇರುವ ಗೂಡ್ಸ್ ಸ್ಟ್ಯಾಂಡ್ ಬಳಿ ಪತ್ತೆಯಾದ ಶಿಶು. ಮಗುವಿನ ಅಳುವ ಸದ್ದು ಕೇಳಿ ಮಗುವಿನ ರಕ್ಷಣೆ ಮಾಡಿದ ಸ್ಥಳೀಯರು. ಬಸ್ ನಿಲ್ದಾಣದ ಸುತ್ತಮುತ್ತ ಬೀದಿನಾಯಿಗಳು ಓಡಾಡುತ್ತವೆ. ಅದೃಷ್ಟವಶಾತ್ ಯಾವುದೇ ಅಪಾಯ ಇಲ್ಲದೆ ಬದುಕುಳಿದಿರುವ ಶಿಶು. ಸ್ಥಳೀಯರು ಮಗುವಿನ ರಕ್ಷಣೆ ಮಾಡಿದ್ದು, ಸದ್ಯ ಯಲಹಂಕದ ಈಶಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಕ್ಕಳ ಮಾರಾಟ ದಂಧೆ : ದೆಹಲಿಯ ವಿವಿಧ ಪ್ರದೇಶಗಳಲ್ಲಿ ಸಿಬಿಐ ದಾಳಿ: 2 ನವಜಾತ ಶಿಶುಗಳ ರಕ್ಷಣೆ

ಹಸುಗೂಸು ಶಿಶು ಪತ್ತೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios