Asianet Suvarna News Asianet Suvarna News

ಶಿವಮೊಗ್ಗ ಗ್ಯಾಂಗ್ ವಾರ್‌ನಲ್ಲಿ 3 ಹತ್ಯೆ, 19 ಆರೋಪಿಗಳ ಬಂಧನ, ಬಿಗಿ ಬಂದೋಬಸ್ತ್‌ನಲ್ಲಿ ಯಾಸಿನ್ ಅಂತ್ಯ ಸಂಸ್ಕಾರ

ಶಿವಮೊಗ್ಗ ಲಷ್ಕರ್ ಮೊಹಲ್ಲಾದಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಎರಡು ಗುಂಪಿನ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬರೋಬ್ಬರಿ 19 ಆರೋಪಿಗಳನ್ನು ಬಂಧಿಸಲಾಗಿದೆ.

Shivamogga gang war three rowdies death many arrested in Lashkar Mohalla gow
Author
First Published May 11, 2024, 6:44 PM IST

ಶಿವಮೊಗ್ಗ (ಮೇ.11): ನಗರದ ಲಷ್ಕರ್ ಮೊಹಲ್ಲಾದಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಎರಡು ಗುಂಪಿನ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬರೋಬ್ಬರಿ 19 ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾದಲ್ಲಿ ಬುಧವಾರ ಸಂಜೆ ನಡೆದಿದ್ದ ಗ್ಯಾಂಗ್ ವಾರ್‌ ಗಾಯಗೊಂಡಿದ್ದ ರೌಡಿಶೀಟರ್ ಯಾಸಿನ್ ಖುರೇಷಿ ಚಿಕಿತ್ಸೆ ಫಲಿಸದೇ ಗುರುವಾರ ಸಾವನ್ನಪ್ಪಿದ್ದು, ಇದರಿಂದಾಗಿ ಗ್ಯಾಂಗ್ ವಾರ್‌ನಲ್ಲಿ ನಡೆದ ಕೊಲೆಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

KAS ಅಧಿಕಾರಿ ಪತ್ನಿ ಹೈಕೋರ್ಟ್ ವಕೀಲೆ ಅನುಮಾನಸ್ಪದ ಸಾವು, ಡೆತ್‌ ನೋಟ್‌ ಪತ್ತೆ

ಗ್ಯಾಂಗ್‌ವಾರ್‌ನಲ್ಲಿ ಕೆ.ಆ‌ರ್.ಪುರಂನ ಸುಹೈಲ್ ಮತ್ತು ಅಣ್ಣಾನಗರದ ಗೌಸ್ ಕೊಲೆಯಾಗಿತ್ತು. ಈ ಗಲಾಟೆಯಲ್ಲಿ ಗಾಯಗೊಂಡಿದ್ದ ಯಾಸಿನ್ ಖುರೇಷಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಾಸಿನ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಸುಹೈಲ್ ಮತ್ತು ಗೌಸ್ ಹತ್ಯೆ ಮಾಡಿದವರು ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಗ್ಯಾಂಗ್ ವಾರ್ ಪ್ರಕರಣದಲ್ಲಿ ಒಟ್ಟು19 ಆರೋಪಿಗಳ ಬಂಧಿಸಲಾಗಿದೆ. ಸುಹೈಲ್ ಮತ್ತು ಗೌಸ್ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಯಾಸಿನ್ ಖುರೇಷಿ ಕಡೆಯ 10 ಹಾಗೂ ಆದಿಲ್ ಗುಂಪಿನ 9 ಜನರ ಬಂಧನ ಮಾಡಲಾಗಿದೆ. 10 ಮಂದಿ ಮೇಲೆ 302 ಹಾಗೂ 9 ಮಂದಿ ಮೇಲೆ 307 ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿಗೆ ಗುಳೆ ಹೋದ 8 ನೇ ತರಗತಿ ಬಾಲಕಿ ಕಿಡ್ನಾಪ್!

ಇನ್ನು  ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್  ಬಂಧಿತ ಆರೋಪಿಗಳ ಹೆಸರು ಬಿಡುಗಡೆ ಮಾಡಿದ್ದಾರೆ.  ಆದಿಲ್‌ ಗ್ಯಾಂಗ್‌ನ ಆದಿಲ್‌ ಪಾಷಾ, ಶಾಕಿಬ್‌, ಸಂಗೀರ್‌, ಸಮೀರ್‌ ಅಲಿಯಸ್‌ ಅಫ್ಫು, ಇಬ್ರಾರ್‌ ಅಲಿ ಅಲಿಯಾಸ್‌ ಇಬ್ಬು, ಇಮ್ರಾನ್‌ ಅಲಿಯಾಸ್‌ ನಿಮ್ಮು, ಪರ್ವೇಜ್‌, ಪ್ರತಾಪ್‌ ಅಲಿಯಾಸ್‌ ಅಣ್ಣನನ್ನು ಬಂಧನವಾಗಿದೆ. 

ಖುರೇಶಿ ಗ್ಯಾಂಗ್‌ನ ಮೊಹಮ್ಮದ್‌ ರಿಜ್ವಾನ್‌ ಅಲಿಯಾಸ್‌ ತೊಟ್ಟು, ಆರ್ಯನ್‌ ಖಾನ್‌, ಶಾಬಾಜ್‌ ಖಾನ್‌, ಅಜರ್‌, ಯಾಸೀನ್‌ ಅಲಿಯಾಸ್‌ ಬ್ಯಾಟ್‌, ಸುಹೇಬ್‌ ಅಲಿಯಾಸ್‌ ಡೇಂಜರ್‌, ಸೋಹೇಲ್‌ ಅಲಿಯಾಸ್‌ ಕೊಂಗಾಟಿ, ರಿಜ್ವಾನ ಪಾಷಾ ಬಂಧಿತರು.

ಬಿಗಿ ಬಂದೋಬಸ್ತ್‌ನಲ್ಲಿ ಖುರೇಷಿ ಅಂತ್ಯ ಸಂಸ್ಕಾರ:
ಇನ್ನು ಗುರುವಾರ ಮೃತನಾದ ರೌಡಿ ಯಾಸಿನ್ ಖುರೇಷಿ ಅಂತ್ಯ ಸಂಸ್ಕಾರ ಬಿಗಿ ಬಂದೋಬಸ್ತ್ ನಲ್ಲಿ ನಡೆದಿದೆ.  ಶಿವಮೊಗ್ಗದ ಬಸ್ ನಿಲ್ದಾಣದ ಬಳಿಯ ಖಬರಸ್ಥಾನದಲ್ಲಿ ಅಂತ್ಯ ಸಂಸ್ಕಾರ  ನಡೆದಿದ್ದು,  ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದ ಹಿನ್ನೆಲೆ  ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಶವದ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದೆ ಅಂತ್ಯ ಸಂಸ್ಕಾರ ನೆರವೇರಿತು.

Latest Videos
Follow Us:
Download App:
  • android
  • ios